ಅಮ್ಮ


ತೊದಲಿದರೂ ಮೊದಲಿಗೆ ನುಡಿಯುವ ಶಬ್ದ
ಕೇಳಿದಾಕ್ಷಣ ಈ ಜಗವೇ ಸ್ಥಬ್ದ ||
ಮುಖ ನೋಡಿದರೇನು ನಷ್ಟ
ಆ ಸುಖ ನೋಡುವುದೆನಗೆ ಇಷ್ಟ

ಇಟ್ಟಾಗ ಮೊದಲ ಅಂಬೆಗಾಲು
ನುಡಿದಾಗ ಮೊದಲ ತೊದಲ ಸಾಲು |
ಚಿಮ್ಮುವುದು ಮುಖ ಕಮಲದಿ ಹೂನಗೆ ||
ಮೂಡುವುದು ಮುಗುಳ್ನಗೆ, ಕಂಡಾಗ ನಮ್ಮ ಆಟ ಬಗೆ-ಬಗೆ

ಆಗುವಳು ಏಳುವಾಗಿನ ಕೋಳಿ | ಮಲಗುವಾಗಿನ ಲಾಲಿ
ಓಡುವಳು ಜೊತೆ ಜೊತೆಗೆ ದೂರ ಮೈಲಿ ಮೈಲಿ ||
ತೋರುವಳು ಸಿಟ್ಟು, ಕೊಡುವಳು ಏಟು
ಮಾಡದಿರು ಬೊಟ್ಟು, ತಿಳಿ ಅದರ ಗುಟ್ಟು ||

ಗುಟ್ಟು ರಟ್ಟಾದಾಗಲೇ ನಿನ್ನ ಏಳಿಗೆ
ಅವಳದೇ ಆದರ್ಶ ನಿನ್ನ ಬಾಳಿಗೆ |
ದೊಡ್ಡವನಾದೊಡೆ ಓಡದಿರು ದೂರ
ನೀನೆಂದೂ ಅವಳಿಗೆ ಇನ್ನು ಪುಟ್ಟ ಪೋರ ||

No comments:

Post a Comment